Title | : | ಕತೆಯಾದಳು ಹುಡುಗಿ | Katheyadalu Hudugi |
Author | : | |
Rating | : | |
ISBN | : | - |
Language | : | Kannada |
Format Type | : | Paperback |
Number of Pages | : | - |
ಕತೆಯಾದಳು ಹುಡುಗಿ | Katheyadalu Hudugi Reviews
-
ಕತೆಯಾದಳು ಹುಡುಗಿ
ಯಶವಂತ ಚಿತ್ತಾಲ
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕೃತಿ
ನಾನು ಓದಿರುವ ಚಿತ್ತಾಲರ ಒಂದೊಂದು ಕೃತಿಯೂ ಸುಂದರವಾಗಿದೆ, ಅರ್ಥ ಗ್ರಹಿಸಲು ಸ್ವಲ್ಪ ಸಮಯವೂ ಹಿಡಿಸುತ್ತದೆ,ಆದರೆ ಅವರ ಕೃತಿಗಳು ಅರ್ಥವಾದರೆ ನಾವು ಗೆದ್ದ ಹಾಗೆ. ನಾನು ಓದಿದ ಶಿಕಾರಿ, ಮೂರು ದಾರಿಗಳು, ಛೇದ, ಕೇಂದ್ರ ವೃತ್ತಾಂತ ಹಾಗು ಕತೆಯಾದಳು ಹುಡುಗಿ ಕೃತಿಗಳು ಅದರಲ್ಲಿ ಬರುವ ಪಾತ್ರಗಳು ನೆನೆದರೆ ಈ ಪಾತ್ರಗಳು ನಮ್ಮ ಸುತ್ತಮುತ್ತಲಿನಲ್ಲಿ ಇರುವಹಾಗೆ ಭಾಸವಾಗುತ್ತದೆ .
ಕತೆ:
ಅಂದು ಸರಿ ಸುಮಾರು ೧೩ ನೆಯ ದಿನ ೧೩ ವರುಷದ ಜಾನಕಿ ತೀರಿಕೊಳ್ಳುವ ಮುನ್ನ ತನ್ನ ಬಗ್ಗೆ ಕಥೆ ಬರೆಯುತ್ತೀಯಾ ಎಂದು ಹಾಗು ಆ ಕಥೆಯಲ್ಲಿ ತನ್ನನ್ನು ನೋಡಿಕೊಂಡ ಡಾಕ್ಟರ್ ಆನಂದ್ ಹಾಗು ನರ್ಸ್ ಮೇರಿಯನ್ನು ಸೇರಿಸಬೇಕೆಂದು ಕೇಳಿಕೊಂಡಳು. ಆದರೆ ನನಗೆ ಅರಿವಾಗಲಿಲ್ಲ ಅಂದೇ ಜಾನಕಿ ಕೇಳಿದ್ದಾದರೂ ಏತಕ್ಕೆಂದು. ಮನಗೆ ಬಂದಮೇಲೆ ಆಕೆ ಹೇಳಿದಹಾಗೆ ಬರೆಯೋಣವೆಂದು ಜಾನಕಿಯ ಬಳಿ ಪ್ರಸ್ತಾಪಿಸಿದಾಗ ಆಕೆ ಮಾತನಾಡಲಿಲ್ಲ, ಸುಂದರವಾಗಿ ನಕ್ಕಳು, ಅದೇ ಆಕೆಯ ಕೊನೆಯ ಮಾತು ಹಾಗು ಕೊನೆಯ ನಗೆ. ಮುಂಬಯಿಯ ಆಸ್ಪತ್ರೆಯೊಂದರಲ್ಲಿ ರಕ್ತ ಕ್ಯಾನ್ಸರ್ ನಿಂದ ೧೩ನೆಯ ದಿನ ತೀರಿಕೊಂಡಳು. ಆ ರೋಗವು ಗುಣಪಡಿಸಲು ಸಾಧ್ಯವಾಗುವುದಿಲ್ಲವೆಂದು ಡಾಕ್ಟರ್ ಹೇಳಿದ್ದರು, ಆದರೂ ಆ ೧೩ ವರ್ಷದ ಜಾನಕಿ ೧೩ ದಿನದಲ್ಲಿ ಅವರಲ್ಲಿ ಎಷ್ಟು ಹತ್ತಿರದವಳಾಗಿದ್ದಳೆಂದರೆ ಆಶ್ಚರ್ಯವೇ. ಆಕೆಯ ಸಾವಿನಿಂದ ಎಲ್ಲರಿಗೂ ದುಃಖವಾಯಿತು. Be Brave, She was a brave girl ಎಂದು ಆನಂದ್ ಹೇಳಿ ಹೊರಟೇ ಹೋದರು.
ಜಾನಕಿ ಇಲ್ಲೇ ಹತ್ತಿರದ ಜೋಪಡಿಪಟ್ಟಿಯೊಂದರಲ್ಲಿ ವಾಸಿಸುತ್ತಿದ್ದಳು, ಅದು ಇದ್ದದ್ದು ಬಾಂದ್ರಾದಲ್ಲಿ ಮಾಹೀಮ್ ಕಾಜ್ವೇ ಹಾಗು ವಿಮಾನ ನಿಲ್ದಾಣದ ಕೂಟಸ್ಥಾನದ ಬದಿಗಳಲ್ಲ. ಕತೆ ಶುರುಮಾಡಲು ಹೊರಟರೆ ಆಸ್ಪತ್ರೆಯಲ್ಲಿ ಜಾನಕಿ ಮಲಗಿರುವುದೇ ನೆನಪಾಗುತ್ತಿತ್ತು, ಅಲ್ಲಿ ಅವರು ಒದಗಿಸಿದ ಸಮವಸ್ತ್ರ ಸುತ್ತಿಕೊಂಡ ದೇಹ, ಹೆಸರು, ಜಾತಿ, ಮತ, ಪಂಥ ಆ ಸಮಯದಲ್ಲಿ ವ್ಯರ್ಥ, ಒಂದೇ ಉದ್ದೇಶ ಬದುಕಿ ಬರಬೇಕು, ಹ್ಯಾಗೆ ಬರಬೇಕು ಅದಕ್ಕೆ ಉತ್ತರವಿಲ್ಲ. ಬದುಕಬೇಕು ಯಾರಿಗಾಗಿ ತನ್ನ ಅಪ್ಪ-ಅಮ್ಮನಿಗಾಗಿ, ಅಣ್ಣ-ತಂಗಿಗಾಗಿ, ಅವರ ಪ್ರೀತಿಯಲ್ಲಿ ತನ್ನ ಇಡೀ ಜೀವನ ಸಾಗಿಸುವುದಕ್ಕಾಗಿ. ಒಂದು ದಿನ ಹೀಗೆ ಹರಕುಮುರುಕು ಗುಡಿಸಿಲಿನ ಎದುರು ತನ್ನ ಅಪ್ಪ ಅಮ್ಮನನ್ನು ನಿರೀಕ್ಷಿಸುತ್ತಾ ಒಬ್ಬಳೇ ನಿಂತಿದ್ದಳು, ಎಲ್ಲಿಂದಲೋ ಇದನ್ನೇ ಕಾಯುತ್ತಿರುವ ಹಾಗೆ ಸ್ಕೂಟರ್ ಮೇಲೆ ಬಂದ ಇಬ್ಬರು ಯುವಕರು ಕ್ಷಣಮಾತ್ರದಲ್ಲಿ ಆಕೆಯನ್ನು ಎತ್ತಿ ಗುಡಿಸಿಲಿನ ಒಳಗೆ ನಡೆದು, ಕೈಗಳೆರಡನ್ನೂ ಕಟ್ಟಿ, ಬಾಯಿ,ಕಣ್ಣುಗಳಿಗೆ ಬಟ್ಟೆ ಕಟ್ಟಿ ಅತ್ಯಾಚಾರವೆಸಗಿದರು, ಪಶುವಿಗೂ ಕಡೆಯಾಗಿ ಆ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಅವಳನ್ನು ಚಾಕುವಿನಿಂದ ತಿವಿದು ಓಡಿಹೋದರು. ೧೩ ವರ್ಷದ ಹುಡುಗಿ ಹೇಗೆ ಸಹಿಸಿಕಂಡಳೋ ನೆನೆದರೆ ದುಃಖವಾಗುತ್ತದೆ, ಯುವಕರನ್ನು ಕೊಲ್ಲಬೇಕೆಂದು ಸಿಟ್ಟೂ ಬರುತ್ತದೆ. ಸತ್ತವಳ, ಕೊಂದವರ ಜಾತಿ, ಧರ್ಮ,ವರ್ಗ ಆ ಸಮಯದಲ್ಲಿ ಯಾವುದೂ ನೆನಪಾಗುವುದಿಲ್ಲ, ಇಂತಹ ಘಟನೆಯನ್ನು ಕೇಳಿದ ಕೂಡಲೇ ಕಣ್ಣಿನಲ್ಲಿ ಹನಿಗೂಡುತ್ತದೆ. ಬರಿ ಕಣ್ಣೀರು ಸುರಿಸಿದರೆ ಸಾರ್ಥಕವಾಯಿತೆ, ಖಂಡಿತ ಇಲ್ಲ, ಈ ಘಟನೆಯಿಂದ ನನ್ನ ಮನಸ್ಸನ್ನು ಕಲುಕಿದ್ದಲ್ಲದೇ ಕಥೆ ಬರೆಯುವುದಕ್ಕೆ ದಾರಿಕೊಟ್ಟಿತು ಹಾಗೆ ಹುಟ್ಟಿಕೊಂಡದ್ದೇ “ಚಸ್ನಾಲಾ”.
ಹೀಗೆ ಜಾನಕಿ ಇದ್ದಕ್ಕಿದ್ದ ಹಾಗೆ ಚಸ್ನಾಲಾದ ಕೋಲ್ ಮೈನುಗಳ ಕಾರ್ಮಿಕನೊಬ್ಬನ ಮಗಳಾಗಿ ಹುಟ್ಟಿದಳು. ಚಸ್ನಾಲಾ ದುರಂತ ನೆನೆದರೆ ಸಾಕು ನಡುಕಹುಟ್ಟುತ್ತದೆ, ಕಾರಣ ಮುನ್ನೂರು ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರು ಜೀವಂತ ಜಲಸಮಾಧಿ ಹೊಂದಿದ ದುರ್ಘಟನೆ. ಎಂದಿನಂತೆಯೇ ಬೆಳಿಗ್ಗೆ ಖನಿಯಲ್ಲಿ ಇಳಿದು ಕೆಲಸಕ್ಕೆ ತೊಡಗಿರುವಾಗಲೇ ಎರಡೂ ಖನಿಗಳ ನಡುವೆ ಗೋಡೆ ಬಿರುಕು ಬಿಟ್ಟು ನೀರು ಹರಿಯಲು ಪ್ರಾರಂಭವಾದಾಗ ಕೆಲವೇ ಕ್ಷಣಗಳಲ್ಲಿ ಗೋಡೆ ಕುಸಿದು ನೀರಿನಲ್ಲೇ ಮುಳುಗಿ ಜಲಸಮಾಧಿ ಹೊಂದುತ್ತಾರೆ. ಹೀಗೆ ಕೆಲವರಾದರೂ ಬದುಕಿರಬಹುದೆಂದು ಅಪ್ಪನನ್ನು ಕಾಣಲು ಅಮ್ಮ ತನ್ನ ಉಳಿದ ಮಕ್ಕಳೊಂದಿಗೆ ಹೋಗುವ ಮುಂಚೆ ಜಾನಕಿಯನ್ನು ಗುಡಿಸಿಲಿನಲ್ಲಿ ಬಿಟ್ಟು ಹೋಗುತ್ತಾಳೆ, ಕಾರಣ ಮೂರು ತಿಂಗಳ ಕೂಸನ್ನು ಹೇಗೆ ಕೊಂಡೊಯ್ಯುವುದು, ಆದ್ದರಿಂದ ಆ ಮಗುವನ್ನು ನೋಡಿಕೊಳ್ಳಲು ಜಾನಕಿ ಅಲ್ಲಿ ಉಳಿಯುತ್ತಾಳೆ, ಅದೇ ಸಮಯದಲ್ಲಿ ಸ್ಕೂಟರ್ ಸವಾರರು ಬಂದು ಅತ್ಯಾಚಾರವೆಸಗಿದ್ದು, ಚೆಸ್ನಾಲಾದ ಮೈನಿಂಗ್ ಅಲ್ಲಿ ನಡೆದ ದುರ್ಘಟೆನೆಯ ದಿನವೆ ಜಾನಕಿಯ ಬಾಳಿನಲ್ಲೂ ಈ ಘಟನೆ ಸಂಭವಿಸುತ್ತದೆ, ಸತ್ತವಳು ಕಾರ್ಮಿಕನ ಮಗಳು, ಅವಳನ್ನು ಅತ್ಯಾಚಾರ ಮಾಡಿದ್ದು ಖನಿಗಳ ಒಡೆಯರ ಮಕ್ಕಳು. *ಹೀಗೆ ಜಾನಕಿ ಕತೆಯಾಗಿದ್ದಳು*.
ಕತೆ ಪ್ರಕಟವಾಗಿ ಕೆಲವು ದಿನಗಳಾದ ಮೇಲೆ ಸಂಪಾದಕರಿಂದ ಮೆಚ್ಚುಗೆಯ ಪತ್ರವೂ ಬಂದಿತು. ಇದನ್ನು ಕಂಡ ನನ್ನ ಗೆಳೆಯರು ಅಭಿನಂದಿಸಲು ಬಂದರು, ಬಿಯರ್ ಬಾಟಲ್ ತಂದು ಬಿಯರ್ ಸೇವಿಸಿ, ಕತೆ ಅತ್ಯದ್ಭುತವಾಗಿದೆಂದು ಅದನ್ನು ವರ್ಣಿಸಿ ಖುಷಿಯಿಂದ ಹೊರಟುಹೋದರು. ಗೆಳೆಯರ ಮಾತಿನಿಂದ ನನಗೂ ಹಾಗು ಹೆಂಡತಿ ವಹಿನಿಗೆ ದುಃಖವಾಯಿತು, ಇವರು ಕಥೆ ಮೆಚ್ಚುಗೆ ಪಡೆದದಕ್ಕೆ ಅಭಿನಂದಿಸಿದಲ್ಲದೇ, ಬಿಯರ್ ಕುಡಿದು ಆ ಖುಷಿಯಲ್ಲಿ ಕತೆಯನ್ನು ವರ್ಣಿಸಿ ಅದ್ಭುತವಾಗಿದೆಯಂದು ಹೇಳಿ ಹೊರಟುಹೋದರು . ನೀರು ತುಂಬಿದ ಖನಿಯಲ್ಲಿ ಹೇಗೆ ಆ ಮುನ್ನೂರಕ್ಕೂ ಹೆಚ್ಚು ಜನ ವಿಲವಿಲ ಒದ್ದಾಡಿ ಸತ್ತರೋ ನೆನದು ಭಯವಾಯಿತು, ಮೊದಲ ಬಾರಿ ನಾನು ಬರೆದ ಕತೆಯ ಬಗೆಗೆ ಅಸಹ್ಯವಾಯಿತು. ಜಾನಕಿ ಇವರೆಲ್ಲರಿಗೆ ಪರಿಚಯದವಳು, ಲವಲವಿಕೆಯಿಂದ ಸದಾ ಓಡಾಡುತ್ತಿದ್ದ ಆಕೆಯನ್ನು ಬಿಯರಿನ ಅಮಲಿನಲ್ಲಿ ಕೇಳುವುದಕ್ಕೆ ಮರೆತುಹೋದರು, ಅವಳು ಸತ್ತದ್ದು ಇವರಿಗೆ ಗೊತ್ತಿಲ್ಲ, ಇದರಿಂದ ಅಂದು ನನ್ನ ಮುದ್ದು ಜಾನಕಿ ನಿಜವಾಗಿ ಸತ್ತಳು. ನಿಮ್ಮ ಗೆಳೆಯರಲ್ಲಿ ಒಬ್ಬನಿಗೂ ಜಾನಕಿಯ ನೆನಪು ಆಗಬಾರದ ಹಾಗೆ ಅದೆಂಥ ಕತೆ ಬರೆದರೋ, ಅಥವಾ ನಿಮ್ಮ ಗೆಳೆಯರೇ ಕತೆ ಅರ್ಥವಾಗಿದ್ದೂ ಹೀಗೆ ವರ್ತಿಸಿದರೋ, ಬೆಂಕಿ ಬಿತ್ತು ನಿಮ್ಮ ಸಾಹಿತ್ಯಕ್ಕೆ ಮೊದಲು ಸುಟ್ಟುಹಾಕಿ ಇನ್ನ ಮೇಲೆ ಕತೆ ಬರೆಯಬೇಡಿ ಎಂದು ವಹಿನಿ ಆಣೆ ಹಾಕಿ ಹೊರಟುಹೋದಳು.
ಮರುದಿನ ನಾಷ್ಟಾ ಮುಗಿಸಿದ್ದೆ ನಾನು ಹಾಗು ವಹಿನಿ ಪರೇಲ್ ಕಡೆಗೆ ಹೊರಟವು, ಅನಾಥಾಶ್ರಮದಿಂದ ಮಗು ತರುವ ಸೂಚನೆ ಹೆಂಡತಿ ವಹಿನಿ ಹತ್ತು ವರುಷದ ಹಿಂದೆ ಸೂಚಿಸಿದ್ದಳು, ಜಾನಕಿಗೆ ಆಗ ಮೂರು ವರ್ಷ, ವಹಿನಿಗೆ ಮತ್ತೆ ಮಕ್ಕಳಾದರೆ ಅಪಾಯವೆಂದು ಡಾಕ್ಟರ್ ಹೇಳಿದ್ದರು, ಅಂತೂ ನನಗೂ ಹಾಗು ಆಕೆಯ ಮನಸ್ಸಿನಲ್ಲಿದ್ದ ಆಸೆಯ ಪ್ರಕಾರ ಹೆಣ್ಣುಮಗುವನ್ನು ದತ್ತು ಪಡೆದವು. ಅವಳನ್ನು ಜಾನಕಿಯೆಂದೇ ಕರೆದವು. ಹೊರಡುವ ಮುಂಚೆ ದಾದಿ ಹೇಳಿದ ಮಾತು ಮರೆಯಲಾಗುವುದಿಲ್ಲ, ದೇವರು ಕಳಿಸಿದ ಹಾಗೆ ಬಂದಿರಿ, ಈ ಮಗುವನ್ನು ಯಾರೋ ಮಾಹೀಮ್ ಖಾಡಿಯ ಜೋಪಡಿಪಟ್ಟಿಗಳ ಇದಿರಿನ ನೀರಿನ ಪೈಪ್ ಹತ್ತಿರ ಬಿಟ್ಟು ಹೋಗಿದ್ದರಂತೆ. ಜಾನಕಿಗೆ ಈಗ ೧ ವರ್ಷ, ಹುಟ್ಟುಹಬ್ಬಕ್ಕೆ ಮೇರಿ, ಆನಂದ್ ಬಂದಿದ್ದರು, ಒಮ್ಮೆ ಮನೆಗೆ ಬಿಯರ್ ಕುಡಿಯಲು ಬಂದ ಗೆಳಯರು ಏನೋ ನೆಪ ಹೇಳಿ ತಪ್ಪಿಸಿಕಂಡರು ಅದು ನಮಗೂ ಒಳ್ಳೆಯದಾಯಿತು.
ಕಡೆಯಲ್ಲಿ ಕತೆಯಿಂದ ಆಯ್ದುಕೊಂಡ ಕೆಲವು ಸಾಲುಗಳು:
ಕತೆಯಲ್ಲಿ ರಕ್ತ ಕ್ಯನ್ಸರ್ ನಿಂದ ಜಾನಕಿ ಸಾಯುತ್ತಾಳೆ, ಆಕೆಯ ಸಾವು ನಿಜಕ್ಕೂ ದುರಂತ ಆ ಚಿಕ್ಕ ವಯಸ್ಸಿನಲ್ಲಿ ಬಂದದ್ದು, ಈ ಸಾವಿಗೆ, ಈ ದುಃಖಕ್ಕೆ ಯಾವ ಸಮಾಜಿಕ ಮಹತ್ವ ಇಲ್ಲ ಎಂದು ಕೂಗುತ್ತಿರುವ ಸಾಹಿತ್ಯವಾತಾವರಣದ ಪ್ರಚೋದನೆಯಿಂದಾಗಿ ಇಲ್ಲಿಯ ನಾಯಕ ಬರೆಯುವ ಕತೆಯೇ ಚಸ್ನಾಲಾ. ಜಾನಕಿಯನ್ನು ಕಾರ್ಮಿಕರ ಮಗಳಾಗಿ ರೂಪಿಸಿ, ಆಕೆಯ ಮೇಲೆ ಕಾರ್ಮಿಕನ ಒಡೆಯರ ಮಕ್ಕಳೇ ಅತ್ಯಚಾರವಾದಾಗ ನಿಜವಾದ ಕತೆ ಪ್ರಾರಂಭವಾಗುತ್ತದೆ. ದೇವರೆ ಎಲ್ಲರಿಗೂ ಅನ್ನ,ಬಟ್ಟೆ,ಇರಲು ಜಾಗ, ವಿದ್ಯೆ, ಬುದ್ದಿ, ನೌಕರಿ ಇರುವಂತಹ, ಜಾತಿಗಳಿಲ್ಲದ, ವರ್ಗಭೇದವಿಲ್ಲದ, ಶೋಷಣೆಯಿಲ್ಲದ ಸುಖೀ ಸಮಾಜ ಹುಟ್ಟಿ ಬಂದಾಗ ಅದರಲ್ಲಿ ನನ್ನ ಚಿಕ್ಕ ಜಾನಕಿಯ ಬಗ್ಗೆ ಕತೆ ಬರೆಯುವ,ಬರೆದಾಗ ಪ್ರೀತಿಯಿಂದ ಓದುವ ಜನರೂ ಇರಲಿ.
*ಕಾರ್ತಿಕೇಯ* -
Chittala is one of kind writer in Kannada literature. The way chittala uses the characters, place, incidents while telling a story is certainly different from any other author.
Chittala never conclude or judge anything in his stories.He just go on telling story more symbolically and leaves to readers to decides the fate of the story.
story telling is a pure art from and Chittala a great artist.