Title | : | ಕೇಂದ್ರ ವೃತ್ತಾಂತ | Kendra Vruttanta |
Author | : | |
Rating | : | |
ISBN | : | - |
Language | : | Kannada |
Format Type | : | Paperback |
Number of Pages | : | - |
Publication | : | First published January 1, 1995 |
ಕೇಂದ್ರ ವೃತ್ತಾಂತ | Kendra Vruttanta Reviews
-
ಕೇಂದ್ರ ವೃತ್ತಾಂತ
ಯಶವಂತ ಚಿತ್ತಾಲ
ಚಿತ್ತಾಲರ ಕಾದಂಬರಿ ಓದಿ ಅರ್ಥ ಮಾಡಿಕೊಳ್ಳುವುದು ಒಂದು ಕಷ್ಟದ ಕಾರ್ಯವಾದರೆ ಆ ಕಾದಂಬರಿಯ ವಿಮರ್ಶೆ ಬರೆಯುವುದಕ್ಕೆ ಇತರೆ ಕಾದಂಬರಿಗಳಿಗಿಂತ ಸ್ವಲ್ಪ ಕಷ್ಟದ್ದೇ ಕೆಲಸ, ಇದು ಶಿಕಾರಿ, ಛೇದ ಹಾಗು ಮೂರು ದಾರಿಗಳ ವಿಮರ್ಶೆ ಬರೆದಾಗ ನನಗೆ ಅನುಭವವಾಗಿದ್ದು ಈ ಕಾದಂಬರಿಯ ವಿಮರ್ಶೆ ಬರೆಯಲು ಹೊರಟಾಗ ಅದೇ ಅನುಭವವಾಯಿತು.
ಅಭಿಜಿತ್, ಈತನು ಈ ಕಥಾ ಪ್ರಸಂಗದ ನಿರೂಪಕ.
**ಅಭಿಜಿತ್ ನವರ ತಂದೆ ತಾವು ಹೋಗುತ್ತಿದ್ದ ಕಡೆಗೆ ತನ್ನನ್ನು ಕರೆದುಕೊಂಡು ಹೋಗುತ್ತಿದ್ದರು, ಒಮ್ಮೆ ತಮ್ಮ ಗೆಳೆಯರು ಅನಾರೋಗ್ಯದ ಕಾರಣದಿಂದ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ನಲ್ಲಿ ಸೇರಿದ್ದರು ಅವರನ್ನು ಭೇಟಿಮಾಡಲು ಹೋದಾಗ ನಮ್ಮನ್ನು ನೋಡಿ ತುಂಬಾ ಉತ್ತೇಜಿತರಾದವರಂತೆ ಕಂಡರು. ತನ್ನನ್ನು ಕಂಡ ಅಪ್ಪನ ಗೆಳೆಯರು ಹತ್ತಿರದ ಸ್ಟೂಲಿನ ಮೇಲಿರಿಸಿದ ದಿನಪತ್ರಿಕೆಯನ್ನು ಎಳೆದುಕೊಂಡು, ಅಪ್ಪನಿಂದ ಪೆನ್ನು ಪಡೆದುಕೊಂಡು ಪತ್ರಿಕೆಯ ಪುಟವೊಂದರ ಮೇಲೆ ಸುಮಾರು ೬ ಇಂಚು ವ್ಯಾಸದ ಕಾಂಪಾಸ್ ಹಿಡಿದು ಬಿಡಿಸಿದಷ್ಟು ದುಂಡಗಿನ ವರ್ತುಲ ಬಿಡಿಸಿದರು, ವರ್ತುಲದ ಕೇಂದ್ರದಲ್ಲೇ ಗೀರಿ ದೊಡ್ಡ ಬಿಂಬವನ್ನು ರಚಿಸಿದರು, ವೃತ್ತದ ಗಡಿ ರೇಖೆಯ ಮೇಲೆ ಒಂದಡೆಯಲ್ಲಿ ಇಂಗ್ಲೀಷ್ ನ ಎಕ್ಸ್ ಆಕಾರದ ಕಾಟು ಚಿಹ್ನೆಯನ್ನು ಬರೆದು ಎರೆಡರೆಡು ಬಾರಿ ಗೀರಿ ಆಕೃತಿಯನ್ನು ಸ್ಪುಟಗೊಳಿಸಿದರು**.
ಇದನ್ನು ನೆನೆದಾಗ ಅಭಿಜಿತ್ ತನ್ನ ಜೀವನದಲ್ಲಿ ನಡೆದ ಘಟನೆಗಳು ಅಪ್ಪನ ಗೆಳೆಯರು ಮೂಡಿಸಿದ ಚಿತ್ರಕ್ಕೆ ಹೋಲಿಕೆಯಾದಾಗ ಆಶ್ಚರ್ಯವಾಗುತ್ತದೆ. ಇಲ್ಲಿ ಈ ಪರಧಿಯ ಮೇಲೆ ಕುಳಿತವನೊಬ್ಬನು, ಈ ಕೇಂದ್ರದಲ್ಲಿ ನಡೆಯುತ್ತಿದ್ದ ಘಟನೆಗಳೆನ್ನೆಲ್ಲ ಅವು ನಡೆಯುತ್ತಿದ್ದ ಹಾಗೇ ವರದಿ ಮಾಡುತ್ತಾ ಹೋಗುತ್ತಾನೆ. ವರದಿ ಮಾಡುತ್ತಿರುವ���ಗ ಅವನು ತಿಳಿದುಕೊಂಡಿದ್ದೇನೆಂದರೆ, ದೂರದ ಪರಧಿಯ ಮೇಲೆ ಕುಳಿತಿರುವನು ತಾನೆ ಹಾಗು ಕುಳಿತಿರುವ ಕಾರಣಕ್ಕೆೇ ಕೇಂದ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಯಾವುದೇ ರೀತಿಯ ಸಂಬಂಧ ಇಲ್ಲದವನು, ಬರೇ ದೂರದಿಂದ ವೀಕ್ಷಿಸಿ ನಿರ್ಲಿಪ್ತವಾಗಿ ವರದಿ ಮಾಡುವ ಪ್ರತ್ಯಕ್ಷ ಸಾಕ್ಷಿ ತಾನು, ಆದ್ದರಿಂದಲೇ ತನ್ನ ವರದಿ ವಾಸ್ತವಕ್ಕೆ ಹತ್ತಿರವಾದದ್ದು ನಂಬಲೂ ಅರ್ಹವಾದದ್ದು. ಆದರೆ ವರದಿ ಮಾಡುತ್ತ ಹೋದ ಹಾಗೆ ತನಗೆ ಲಕ್ಷಕ್ಕೆ ಬಂದಿರದ ಒಂದು ಸಂಗತಿ ಲಕ್ಷಕ್ಕೆ ಬಂದು ಆಶ್ಚರ್ಯದ ಧಕ್ಕೆಯಾಗುತ್ತದೆ. ತಾನು ಯಾವುದನ್ನು ಒಂದು ವರ್ತುಲದ ಪರಧಿಯ ಮೇಲಿನ ಜಾಗವೆಂದು ತಿಳಿದಿದ್ದೆನೋ ಅದು ಇನ್ನೊಂದೇ ವರ್ತುಲದ ಕೇಂದ್ರವಾಗಿದೆ ಮಾತ್ರವಲ್ಲ, ಅದರ ಪರಧಿಯ ಮೇಲೆ ಕುಳಿತವನೊಬ್ಬನ ವರದಿಗೆ ತಾನೇ ವಸ್ತುವಾಗಿದ್ದೇನೆಂಬುದು ತನ್ನ ಜೀವನದಲ್ಲಿ ನಡೆದ ಘಟನೆಗಳಿಂದ ತಿಳಿಯುತ್ತಾನೆ.
ತಾನು ವಾಸಿಸುತ್ತಿದ್ದುದು ಮುಂಬಯಿಯ ಗಿರ್ಗಾಂವ್ ದ ಖೇತವಾಡಿಯ ಖೇಮರಾಜ ಭವನದಲ್ಲಿ, ಸರಿ ಸುಮಾರು ೫೦ ಮನೆಗಳಿದ್ದವು, ಯಾವ ಘಟನೆ ನಡೆದರೂ ಇಡೀ ಭವನದ ಜನರಿಗೆ ಸರಿ ಸುಮಾರು ೨೦೦ ಮಂದಿಗಳಿಗೆ ಸುದ್ಧಿ ಮುಟ್ಟಿವುದಕ್ಕೆ ಹೆಚ್ಚು ಸಮಯ ಹಿಡಿಸುತ್ತಿರಲಿಲ್ಲ, ಆ ಘಟನೆಗಳು ಒಬ್ಬೊಬ್ಬರಿಂದ ಒಬ್ಬೊಬ್ಬರಿಗೆ ತಿಳಿಯುವಷ್ಟರಲ್ಲಿ ತಮ್ಮದೇ ಆದ ಕಾಲ್ಪನಿಕ ಸೃಷ್ಟಿಗಳಿಂದ ಘಟನೆಗೆ ಸಂಬಂಧಪಟ್ಟ ಹಲವಾರು ಕಥೆಗಳು ಸೃಷ್ಟಿಯಾಗುತ್ತಿದ್ದವು. ಅಂಥದ್ದರಲ್ಲಿ ರೇಖಾ ಮನೆಬಿಟ್ಟು ಓಡಿಹೋದಳೆಂಬ ಸುದ್ಧಿ ತಿಳಿಯುತ್ತದೆ, ಅವಳು ಓಡಿಹೋದದ್ದರಿಂದ ಅವಳನ್ನು ಹೆತ್ತವರಾಗಲೀ ನೆರೆಹೊರೆಯವರಾಗಲೀ ಆಶ್ಚರ್ಯವಾಗುವ ಕಾರಣವಿರಲಿಲ್ಲ, ಇಂಥದ್ದು ನಡೆಯುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು.
ರಾಮಾಜೀಭಾಯಿಗೆ ೫ ಹೆಣ್ಣು ಮಕ್ಕಳು, ಅರುಣಾ,ರೇಖಾ,ಉಜ್ವಲಾ, ಇನ್ನಿಬ್ಬರು, ರೇಖಾ ಓಡಿಹೋದಾಗ ತಾನು ಯಾವೊಬ್ಬ ಹುಡುಗನೊಂದಿಗೆ ಓಡಿಹೋಗಬಹುದೆಂದು ಎಣಿಸಿದ್ದರೋ ಆಕೆಯು ಬೇರೆಯವರ ಜೊತೆಗೆ ಓಡಿಹೋದ ಸಂಗತಿ ತಿಳಿದು ಆಶ್ಚರ್ಯವಾಯಿತು. ಈ ಘಟನೆಯಿಂದ ತಾನೇಕೆ ರಾಮಾಜೀಭಾಯಿಯ ಕುಟುಂಬಕ್ಕೆ ನೆರವಾದೆನೋ? ಆಕೆಯು ಓಡಿಹೋದದಕ್ಕೆ ತನಗೇನು ಸಂಬಂಧವೆಂದು ಅವರ ಕುಟುಂಬಕ್ಕೆ ನೆರವಾಗಲು ಹೋಗಿ ತಾನು ಇಲ್ಲದ ಕಷ್ಟಗಳನ್ನು ಎದುರಿಸುವ ಪರಿಸ್ತಿತಿ ಒದಗಿ ಅದು ತನ್ನ ಕುಟುಂಬದವರೆಲ್ಲರ ಮನಸ್ಸಿನ ಮೇಲೆ ಪರಿಣಾಮ ಬೀರಿದನ್ನು ನೆನೆದಾಗ ಬೇಸರವಾಗುತ್ತದೆ, ರೇಖಾ ಓಡಿಹೋದ ಕಾರಣ ತಾನು ಪೋಲಿಸ್ ಠಾಣೆಯಲ್ಲಿ ಒಂದು ರಾತ್ರಿ ಕಳೆಯುವ ಪ್ರಸಂಗ ಓದಗಿತು, ನಂತರ ಉಜ್ವಲಾಳ ಆತ್ಮಹತ್ಯೆ, ತನ್ನನ್ನು ಇಷ್ಟಪಟ್ಟ ಅರುಣಾ ತಾನು ನಿರಾಕರಿಸಿದ್ದಕ್ಕೆ ಬೇರೆಯವರನ್ನು ಮದುವೆಯಾಗಿ ಖೇತವಾಡಿಯನ್ನು ಬಿಟ್ಟುಹೋದದ್ದು ಈ ಕಥೆಗೆ ಮತ್ತೊಂದು ತಿರುವುಕೊಟ್ಟಿತು, ಆತ್ಮಹತ್ಯೆ ಮುಂಚೆ ರೇಖಾ ಓಡಿ ಹೋಗುವುದಕ್ಕೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವುದಕ್ಕೂ ೫ ಜನ ಕಾರಣ ಅದರಲ್ಲೂ ತಾನು ಒಬ್ಬನು ಎಂದು ತಿಳಿದಾಗ ಆಶ್ಚರ್ಯವಾಗುತ್ತದೆ, ಈ ಎಲ್ಲಾ ಪ್ರಕರಣಗಳಿಂದ ತಾನು ಸಿಕ್ಕಿಕೊಂಡು ಅದರಿಂದ ಹೇಗೆ ಬಿಡಿಸಿಕೊಳ್ಳುತ್ತಾನೆನ್ನುವುದು ಹಾಗು ಆ ಘಟನೆಗಳಿಂದ ತಾನು ನೆರವಾಗಲು ಹೊರಟು ತಾನೆೇ ಕಷ್ಟಗಳನ್ನು ಎದುರಿಸುವ ಪ್ರಸಂಗ ಒದಗಿ ಅದು ತನ್ನ ಸೋದರತ್ತೆ, ಮಡದಿ ಜಾಹ್ನವಿಯರ ಮನಸ್ಸಿನ ಮೇಲೆ ಬೀರಿದ ಪ್ರಭಾವಗಳು, ಇದರಲ್ಲಿ ಉಜ್ವಲಾಳ ಪಾತ್ರ, ಅರುಣಾಳ ಪಾತ್ರ, ತಮ್ಮ ಆಫೀಸಿನಲ್ಲೆ ಕೆಲಸ ಮಾಡುತ್ತಿದ್ದು ತನಗೆ ಸಂಬಂಧಿಕರಾದ ಗೋದಾವರಿಯ ಪಾತ್ರ, ಪತ್ರಕರ್ತರ ಪಾತ್ರ, ಇದರಲ್ಲಿ ರಾಜಕಾರಣಿಗಳು ತೊಡಗಿಸಿಕೊಂಡದ್ದು, ತಮ್ಮ ನೆರೆಮನೆಯವರಾದ ಹಾಗು ಪತ್ರಕರ್ತರಾದ ಮುಕುಂದರಾವ್ ತನ್ನ ಮೇಲೆ ಇಲ್ಲದ ಆರೋಪ ಹೊರಿಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದುದು, ತಾನು ಕೆಲಸ ಮಾಡುವಲ್ಲಿ ತನ್ನ ಬಾಸ್ ನ ಪಾತ್ರ,ಪರಶುರಾಮ ಕಾಕ ಇನ್ನು ಹಲವು ಪಾತ್ರಗಳು ಒಂದೊಕ್ಕೊಂದು ಹೊಂದಿಕೊಂಡಿದ್ದವು ಇದರಲ್ಲಿ ಯಾರ ಕೈವಾಡವಿದೆಯೆಂದು ಹಲವಾರು ಘಟನೆಗಳ ಮೂಲಕ ಎಲ್ಲರ ಮೇಲೂ ಸಂಶಯ ಒದಗಿ ಕಡೆಗೆ ಎಲ್ಲರೂ ತನ್ನನ್ನೇ ಅನುಮಾನಿಸಿದಾಗ ಆ ವೃತ್ತಾಂತಗಳಿಂದ ಹೇಗೆ ತನ್ನನ್ನು ತಾನು ಕಾಪಾಡಿಕೊಳ್ಳುತ್ತಾನೆನ್ನುವುದೇ ಇಡೀ ಕಾದಂಬರಿಯ ವಸ್ತು.
ರೇಖಾ ನಾಪತ್ತೆ ಹಾಗು ಉಜ್ವಲಾಳ ಆತ್ಮಹತ್ಯೆ ,ನೆರವಾಗಲು ಹೋದ ಅಭಿಜಿತ್ ನಿಂದ ಮನುಷ್ಯರ ಮನಸ್ಸುಗಳ ಮೇಲೆ ಹೇಗೆ ಪರಿಣಾಮಕಾರಿಯಾಯಿತೆನ್ನುವುದು ಹಾಗು ಮನಸ್ಸಿನ ಭಾವನೆಗಳನ್ನು ಚಿತ್ತಾಲರು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಅತ್ಯುತ್ತಮ ಕಾದಂಬರಿ.
*ಕಾರ್ತಿಕೇಯ* -
his novel.story of a man lives in bombay lacks interest after mid pages...but totally a good read