Title | : | ಮೂರು ದಾರಿಗಳು | Mooru Darigalu |
Author | : | |
Rating | : | |
ISBN | : | - |
Language | : | Kannada |
Format Type | : | Paperback |
Number of Pages | : | 223 |
Publication | : | Published January 1, 1964 |
ಮೂರು ದಾರಿಗಳು | Mooru Darigalu Reviews
-
ಮೂರು ದಾರಿಗಳು
ಯಶವಂತ ಚಿತ್ತಾಲ
ಹೆಜ್ಜ ಮೂಡದ ಹಾದಿಯಲ್ಲಿ ಭಾಗದಿಂದ ಶುರುವಾಗಿ,ತಥಾಸ್ತು ಎಂದಿತ್ತು ಪ್ರೀತಿ, ಸಿಡಿಮದ್ದಿನ ವಾಸನೆ, ಕಾಲ ಸರಿದಂತೆ ಎಂಬ ೪ ಭಾಗದಲ್ಲಿ ಮುಕ್ತಾಯಗೊಳ್ಳುತ್ತದೆ. ಸಾಣೇಕಟ್ಟೆ, ಗೋಕರ್ಣ, ಕಾರವಾರ,ಕುಮಟ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಥೆ. ನಿರ್ಮಲೆ, ರಾಧಮ್ಮ, ವಿಶ್ವನಾಥ, ಚಂದ್ರಭಾಗಿ, ದೇವಪ್ಪ ಮಾಸ್ತರು, ತುಂಗಕ್ಕ, ರಂಗಪ್ಪ, ವಾಸುದೇವ, ರಾಮನಾಥ, ನಾರಾಯಣ ಜೋಯಿಸರು ಮುಖ್ಯ ಪಾತ್ರಗಳು.
ನಿರ್ಮಲೆ ೩ ದಾರಿಯಲ್ಲಿ ಯಾವ ದಾರಿ ಹಿಡಿಯುತ್ತಾಳೆ? ೧.ತನ್ನನ್ನು ಮದುವೆಯಾಗಲು ಬಂದ ವಾಸುದೇವನನ್ನು ಮದುವೆಯಾಗುತ್ತಾಳಾ?
೨.ರಂಗಪ್ಪನ ಮೇಲೆ ಪ್ರೀತಿ ಇದ್ದ ಕಾರಣ ಆತನನ್ನು ಒಲಿಸುತ್ತಾಳಾ?
೩.ವಲ್ಲೀಗದ್ದೆಯ ಸುಬ್ಬನ ಮಗ ರಂಗಪ್ಪನ ಸ್ಟೂಡಿಯೋದಲ್ಲಿ ನಿರ್ಮಲೆ, ಎಂಬ ಸುದ್ದಿಯನ್ನು ಹಲವಾರು ವ್ಯಕ್ತಿಗಳು ನಾನಾ ರೀತಿಯಾಗಿ ತಮ್ಮದೇ ಆದ ಕಥೆಗಳನ್ನು ಸೇರಿಸುತ್ತಾ, ಅವರ ನಡುವೆ ಬದುಕಲಾಗದೇ ಸಾಯುವುದೇ ಲೇಸೆಂಬ ಆ ದಾರಿ ಹಿಡಿಯುತ್ತಾಳಾ?
ಈ ದಾರಿಯಲ್ಲಿ ನಿರ್ಮಲೆ ಯಾವ ದಾರಿಯನ್ನು ಆಯ್ಕೆ ಮಾಡಿದಳೆಂಬುದೇ ಈ ಕಾದಂಬರಿಯ ಕಥಾವಸ್ತು
*ಹೆಜ್ಜ ಮೂಡದ ಹಾದಿಯಲ್ಲಿ* :
ಸಾಣೇಕಟ್ಟೆಯಲ್ಲಿ ಅಂಗಡಿ ವ್ಯಾಪಾರದಲ್ಲಿದ್ದ ನಿರ್ಮಲೆಯ ತಂದೆ ವಿಶ್ವನಾಥರನ್ನು ಆ ಊರಿನವರು ನಿರ್ಮಲೆಯ ಮದುವೆಯ ವಿಷಯದ ಬಗ್ಗೆ ಕೇಳಿದಾಗಲೆಲ್ಲಾ ಆತಂಕ ಪಡುತ್ತಿದ್ದರು. ತುಂಗಕ್ಕ ರಾಮನಾಥನಿಗೆ (ವಿಶ್ವನಾಥರ ತಂಗಿ ಚಂದ್ರಭಾಗಿ ಮಗನಿಗೆ) ರಂಗಪ್ಪನ ಸ್ಟೂಡಿಯೋದಲ್ಲಿ ನಿರ್ಮಲೆಯ ಎಂಬ ಸುದ್ದಿಯನ್ನೇ ಹಿಡಿದು ಅದಕ್ಕೆ ಇನ್ನಿಲ್ಲದ ಕಥೆ ಸೇರಿಸಿ ತಲೆ ತುಂಬಿಸಿರುತ್ತಾಳೆ. ಈ ಸುದ್ಧಿಯಿಂದ ಜನರ ಬಳಿ ಇಲ್ಲದ ಆಪಾದನೆಗೆ ನಿರ್ಮಲೆ ಒಳಗಾಗುತ್ತಾಳೆ. ತಮ್ಮ ಮನೆತನಕ್ಕೆ ಕೆಟ್ಟ ಹೆಸರು ತರುವ ಈ ಹುಡುಗಿಯನ್ನು ಇನ್ನು ಮುಂದೆ ತಮ್ಮ ಮನೆಯಲ್ಲಿ ನಿಲ್ಲಿಸಿಕೊಳ್ಳುವುದಿಲ್ಲ, ನಾಳೆ ಊರಲ್ಲಿ ತಲೆಯತ್ತಿ ತಿರುಗುವುದು ಕಠಿಣವಾದೀತೆಂದು ರಾಮನಾಥ ನಿರ್ಮಲೆಯನ್ನು ವಿಶ್ವನಾಥರ ಬಳಿ ಬಿಟ್ಟು ಹೋಗುತ್ತಾನೆ. ತನ್ನ ಮನೆತನದ ಕೀರ್ತಿಯನ್ನೇ ಅಣಕಿಸುತ್ತಾನಲ್ಲಾ, ತಮ್ಮ ನಿರ್ಮಲೆ ಅಂಥವಳಲ್ಲಾ ಅವಳ ಬಗ್ಗೆ ತಮಗೆ ಗೊತ್ತಿದೆ ಎಂದು ವಿಶ್ವನಾಥರು ಕಿಡಿಕಾರುತ್ತಾರೆ. ಅಂತೂ ಕ್ರಮೇಣ ಆ ಸ್ಟೂಡಿಯೋ ಪ್ರಸಂಗ ತಿಳಿಯುತ್ತದೆ: ಗ್ಯಾದರಿಂಗ್ ದಿನ ಮಾಧವ ರಂಗಪ್ಪನಿಗೆ ಪೋಟೋ ತೆಗೆಯಲು ಹೇಳಿರುತ್ತಾನೆ, ಈ ವಿಷಯವನ್ನು ಸಾವುಕಾರ ಮಾಸ್ತರರಿಗೆ ಹೇಳಿ ಆತನಿಗೆ ನೆನಪು ಮಾಡು���ಂತೆ ಹೇಳಿರುತ್ತಾನೆ, ರಂಗಪ್ಪನ ತಂಗಿ ತಾರಾ, ನಿರ್ಮಲೆ ಹೇಗೋ ಶಾಲೆಗೆ ಹೋಗುವುದನ್ನು ಕಂಡ ಮಾಸ್ತರರು ರಂಗಪ್ಪನಿಗೆ ಮಾಧವನು ಹೇಳಿದ ವಿಷಯ ತಿಳಿಸಲು ಹಾಗು ತಾನು ಅಲ್ಲಿಯವರೆಗೂ ಹೋಗುವುದು ತಪ್ಪುತ್ತದೆಂದು ಕೇಳಿಕೊಂಡಾಗ, ಸ್ಟೂಡಿಯೋ ಬಳಿಯಿದ್ದ ನಿರ್ಮಲೆಯನ್ನು ನೋಡಿ ಇಲ್ಲದ ಸುದ್ದಿ ಹಬ್ಬಿಸಿದ್ದರೆಂದು ವಿಶ್ವನಾಥರು ನಿಟ್ಟುಸಿರು ಬಿಡುತ್ತಾರೆ.
*ತಥಾಸ್ತು ಎಂದಿತ್ತು ಪ್ರೀತಿ*:
ನಿರ್ಮಲೆಯ ತಪ್ಪಿಲ್ಲದಿದ್ದನ್ನು ತಿಳಿದು ಅಂದೇ ವಿಶ್ವನಾಥರು ಆಕೆಯ ಜಾತಕವನ್ನು ಹಿಡಿದು ಹರವಟ್ಟೆಯಲ್ಲಿ ವಾಸುದೇವನ ಮನೆಗೆ ಹೋಗುತ್ತಾನೆ, ಆತ ಶಾಲಾ ಮಾಸ್ತರನು, ಹಲವಾರು ಸಂಬಂಧಗಳನ್ನು ನಿರಾಕರಿಸಿದ್ದನು ಕಾರಣ, ತಾನು ಬರೀ ಮಾಸ್ತಾರನೆಂದು ತನಗಿಂತ ಉನ್ನತ ಹುದ್ದೆಯಲ್ಲಿರುವವರು ಸಿಗಬಹುದೆಂಬ ಹೆಣ್ಣುಗಳ ದೃಷ್ಟಿಯಿಂದ. ವಿಶ್ವನಾಥರು ಬಂದು ಕೇಳಿಕೊಂಡಾಗ ಇಲ್ಲ ಎನ್ನಲಾಗದೆ ತನ್ನ ಮಿತ್ರ ಶಿನ್ನನ ಬಳಿ ಮಾತನಾಡಿ ಪತ್ರ ಬರೆಯುವನೆಂದು ಹೇಳುತ್ತಾನೆ. ವಲ್ಲೀಗದ್ದೆಯ ಸುಬ್ಬನ ಮಗ ರಂಗಪ್ಪನ ಸ್ಟೂಡಿಯೋದಲ್ಲಿ ನಿರ್ಮಲೆ, ಎಂಬ ಸುದ್ದಿಯನ್ನು ಶಿನ್ನನೂ ವಿವರಿಸಿ ಈ ಮದುವೆಯು ಬೇಡ ಎಂದು ಸೂಚಿಸಿದಾಗ, ಆಕೆಯ ದೃಷ್ಟಿಯಿಂದ ಆಕೆಗೆ ಒಂದು ಬಾಳುಕೊಡಬೇಕೆಂದು ನಿರ್ಧರಿಸಿ ಸಂಬಂಧ ಒಪ್ಪಿಗೆ ಎಂದು ವಾಸುದೇವನು ಪತ್ರ ಬರೆಯುತ್ತಾನೆ.
*ಸಿಡಿಮದ್ದಿನ ವಾಸನೆ:*
ವಾಸುದೇವನು ತನ್ನನ್ನು ಒಪ್ಪಿದನೆಂದು ತಿಳಿದ ನಿರ್ಮಲೆ ಕಿಡಿಕಾರುತ್ತಾಳೆ, ಏನು ಜನಗಳಪ್ಪ ರಂಗಪ್ಪನ ಸ್ಟೂಡಿಯೋದಲ್ಲಿ ನಿರ್ಮಲೆ, ಎಂಬ ಸುದ್ದಿಯನ್ನು ಹರಡಿಸುತ್ತಿದ್ದಾರಲ್ಲ, ಎಲ್ಲರ ದೃಷ್ಟಿಯಲ್ಲಿ ತಾನು ಒಳ್ಳೆಯವಳು, ಇದರಲ್ಲಿ ತನ್ನ ತಪ್ಪಿಲ್ಲವೆಂಬ ಕರುಣೆ, ಹೆತ್ತ ತಂದೆ ತಾಯಿಗೂ, ಆದರೆ ಪಿಕ್ನಿಕ್ ಹೋದಾಗ ರಂಗಪ್ಪನೂ ಬಂದಿದ್ದ ಒಂದು ಬಂಡೆಯ ಹಿಂದೆ ತಾವಿಬ್ಬರೇ ಇದ್ದಾಗ ಆತನ ಹಸ್ತದ ಸ್ಪರ್ಶದಿಂದಾದ ಸುಖ, ರಂಗಪ್ಪ ಸ್ಟೂಡಿಯೋದಲ್ಲಿ ನನ್ನನ್ನು ಅಪ್ಪಿ ತುಟಿಗೆ ತುಟಿ ಸೇರಿಸಿದಾಗ ತನಗಾದ ರೋಮಾಂಚನ, ತನ್ನನ್ನು ಅಪ್ಪಿಕೊಂಡಾಗ ಪಟ್ಟ ಸುಖ ಇವೆಲ್ಲ ಆತನ ಮೇಲೆ ಪ್ರೀತಿ ಇರುವುದಕ್ಕೆ ಅಲ್ಲವೇ ತಾನು ನಿರಾಕರಿಸದೇ ಇದ್ದದ್ದು, ಮಲಗಿದರೆ, ಎದ್ದರೆ ಅದೇ ನೆನಪಾಗುತ್ತದೆ ಛೇ, ಇತರರ ದೃಷ್ಟಿಯಲ್ಲಿ ರಂಗಪ್ಪನದೇ ತಪ್ಪು ಎನ್ನುವ ಭಾವನೆ. ಒಮ್ಮೆ ತನ್ನನ್ನು ನೋಡಲು ಬಂದ ವಾಸುದೇವನನ್ನು ರಂಗಪ್ಪನ ಬಗ್ಗೆ ಹಾಗು ಆತನ ಮೇಲಿರುವ ಪ್ರೀತಿಯ ಬಗ್ಗೆ ಹೇಳಿ ನಿಮ್ಮ ಉಪಕಾರ ನನಗೆ ಬೇಕಿಲ್ಲ ಎಂದು ಹೊಸ್ತಿಲವರೆಗೆ ಬಂದ ಭಾಗ್ಯವನ್ನು ನಿರಾಕರಿಸುತ್ತಾಳೆ. ನಿರ್ಮಲೆಯ ದೃಷ್ಟಿಯಿಂದ ಆಕೆಯ ವಿಧ್ಯಾಭ್ಯಾಸ ಆಗುವವರೆಗೆ ಕಾಯುವನೆಂದು ವಿಶ್ವನಾಥರಿಗೆ ತಿಳಿಸಿ ಹೊರಟುಹೋಗುತ್ತಾನೆ. ಇದರಿಂದ ವಾಸುದೇವನ ಮೇಲೆ ಮನೆಯವರಿಗೆಲ್ಲಾ ಇನ್ನೂ ಹೆಚ್ಚು ಗೌರವ ಬೆಳೆಯುತ್ತದೆ.
ಇತ್ತ ವಾಸುದೇವನನ್ನು ನಿರಾಕರಿಸಿ ನಿರ್ಮಲೆ ಪುನಃ ಕಾರವಾರಕ್ಕೆ ಹೋಗಿ ಸೂರೀ ಪಾರ್ಕಿನಲ್ಲಿ ರಂಗಪ್ಪನ ಕೋಳ್ಸರೆಯಲ್ಲಿ ತಾನು ಮಲಗಿದಾಗ ತನ್ನನ್ನು ಮುದ್ದಿಸುತ್ತಾ ಇನ್ನೇನನ್ನೋ ಮಾಡಲು ಹೊರಟ ರಂಗಪ್ಪನಿಗೆ ಒದ್ದು ಅವನಿಂದ ತಪ್ಪಿಸಿಕೊಂಡು ಪಾರಾಗುತ್ತಾಳೆ. ಆದರೆ ಈ ಸುದ್ದಿ ಹರಡುವ ಮುಂಚೆ ಬಾವಿಗೆ ಬಿದ್ದು ಆತ್ಮಾಹತ್ಯೆ ಮಾಡಿಕೊಳ್ಳುತ್ತಾಳೆ.
*ಕಾಲ ಸರಿದಂತೆ*:
ಸೂರೀ ಪಾರ್ಕಿನಲ್ಲಿ ನಡೆದ ವಿಷಯ ಹಾಗು ವಾಸುದೇವನ ತಪ್ಪಿಲ್ಲವೆಂದು ಸಾಯುವ ಮುಂಚೆ ನಿರ್ಮಲೆ ಪತ್ರ ಬರೆದು ಹಾಸಿಗೆಯಲ್ಲಿಟ್ಟಿರುತ್ತಾಳೆ, ಆ ಪತ್ರದ ವಿಷಯ ವಿಶ್ವನಾಥರಿಗೆ ಹಾಗು ಪುರುಷೋತ್ತಮರಿಗಷ್ಟೇ ತಿಳಿದಿರುತ್ತದೆ. ಅದೇ ಸಮಯದಲ್ಲಿ ಸಂಬಂಧ ಒಪ್ಪಿಗೆ ಇಲ್ಲವೆಂದು ವಾಸುದೇವನಿಂದ ಪತ್ರ ಬರುತ್ತದೆ. ತನ್ನ ಮಗಳ ಸಾವು ರಂಗಪ್ಪನಿಂದ ಎಂಬ ಅಪಕೀರ್ತಿ ಬರುವುದನ್ನು ತಪ್ಪಿಸಲು ನಿರ್ಮಲೆಯ ಪತ್ರವನ್ನು ಹರಿದು ಹಾಕಿ, ವಾಸುವಿನ ನಿರಾಕರಣೆಯಿಂದಲೇ ಅವಮಾನದಿಂದ ನಿರ್ಮಲೆ ಆತ್ಮಹತ್ಯೆ ಮಾಡಿಕೊಂಡಳೆಂದು ಇದಕ್ಕೆಲ್ಲಾ ವಾಸುದೇವನೇ ಕಾರಣನೆಂದು ಅಪಪ್ರಚಾರ ಮಾಡುತ್ತಾರೆ. ತಪ್ಪಿಲ್ಲದಿದ್ದರೂ ತಪ್ಪನ್ನು ತನ್ನ ಮೇಲೆ ಹಾಕಿಕೊಂಡ ವಾಸುದೇವನು ಎಲ್ಲರಿಂದ ಅವಮಾನಿತನಾಗಿ, ಮಿತ್ರ ಶಿನ್ನನ ದೃಷ್ಟಿಯಲ್ಲೂ ಕೆಟ್ಟವನಾಗಿ ಊರನ್ನು ತೊರೆದು, ನಂತರ ತಾಯಿಯನ್ನು ಕಳೆದುಕೊಂಡು, ಅಕ್ಕನ ಮನೆಯಲ್ಲಿ ಒಬ್ಬಂಟಿಗನಾಗಿ ಬಾಳುತ್ತಾನೆ.
ತನ್ನ ಜೀವನದಲ್ಲಿ ನಡೆದ ಈ ಪ್ರಸಂಗಗಳನ್ನು ಸೇರಿಸಿ ಕಾದಂಬರಿ ಬರೆಯಲು ಶುರುಮಾಡುತ್ತಾನೆ, ಅದುವೆ
*ಕಥೆಯಾದಳು ಹುಡುಗಿ*
*ಕಾರ್ತಿಕೇಯ* -
"ಮಾತು ಮನೆ ಕೆಡಿಸಿತು , ತೂತು ಒಲೆ ಕೆಡಿಸಿತು " ಎಂಬ ಮ��ತು ಈ ಪುಸ್ತಕವನ್ನು ಓದಿದಂತೆ ಅದೇಕೋ ನೆನಪಾಯಿತು. ' ಮೂರು ದಾರಿಗಳು ' ಎಂಬ ಈ ಕಾದಂಬರಿಯಲ್ಲಿ ಮಾತು ಮನವನ್ನೂ ಕೆಡಿಸಬಹುದು ಎಂಬ ಸ್ಪಷ್ಟತೆಯ ಅರಿವಾಯಿತು.
ಚಿತ್ತಾಲರ ಕಥೆಗಳೇ ಹಾಗೆನಿಸುತ್ತದೆ ಅವು ಪಾತ್ರವೊಂದರ ಅಥವಾ ವಿವಿಧ ವ್ಯಕ್ತಿತ್ವಗಳ ಶೋಧನೆ ಎಂದರೆ ತಪ್ಪಾಗಲಾರದು.
' ನಿರ್ಮಲೆ'ಯ ಸುತ್ತ ನಡೆಯುವ ಈ ಕಥೆ ಆ ಒಂದು ' ಪ್ರಕರಣ ' ಹೇಗೆ ಭಿನ್ನ ವಿಭಿನ್ನ ರೂಪ ತಾಳಿತು ಎಂಬುದನ್ನು ಪದರ ಪದರವಾಗಿ ಬಿಚ್ಚುತ್ತಾ ಹೋಗುತ್ತದೆ.
ಊಹಿಸಲಾರದ ಅಂತ್ಯದೊಂದಿಗೆ ಮುಗಿಯುವ ಈ ಕಾದ���ಬರಿ ಕಾಡದೇ ಇರಲಾರದು .
ಈ ಕಾದಂಬರಿಯಲ್ಲಿ ನನಗಿಷ್ಟವಾದ ಪಾತ್ರಗಳೆಂದರೆ ರಾಧಮ್ಮ ಹಾಗೆಯೇ ವಾಸುದೇವ.
ಈ ಕಾದಂಬರಿ ಯಲ್ಲಿ ಬರುವ ಅನೇಕ ಪಾತ್ರಗಳು ನಮಗೆ ಚಿರಪರಿಚಿತವೆನಿಸುತ್ತವೆ , ಕೆಲವೊಂದು ಪಾತ್ರಗಳಲ್ಲಿ ನಮ್ಮನ್ನೇ ನೋಡಿದಂತಾದರೆ ಆಶ್ಚರ್ಯವಿಲ್ಲ.
ಇಲ್ಲಿ ಗಂಭೀರವಾದ ಕಥಾ ವಸ್ತುವಿದೆ ಜೊತೆಗೇ ಪುಟ ತಿರುಗಿಸುವ ರೋಚಕತೆಯೂ ಇದೆ.
ಈ ಕಾದಂಬರಿಯನ್ನು ಓದಿದ ಮೇಲೆ ಚಿತ್ತಾಲರ ಮತ್ತೊಂದಿಷ್ಟು ಕೃತಿಗಳನ್ನು ಓದಬೇಕೆನ್ನುವ ಹಂಬಲ ಮೂಡದೇ ಇರಲಾರದು.
ನನಗೆ ಇಷ್ಟವಾದ ಸಾಲುಗಳು: '' ಭಾಷೆ ಕಲಿತ ಮಾನವ - ವ್ಯಕ್ತಿ ಬರಿಯ ಮಾತಿನ ದುರುಪಯೋಗದಿಂದಲೇ ಇನ್ನೊಬ್ಬರ ಮನಸ್ಸನ್ನು ಎಷ್ಟು ಕೆಡಿಸಬಲ್ಲುದು ? ವ್ಯಕ್ತಿ - ವ್ಯಕ್ತಿಗೆ ಎಷ್ಟು ಅನ್ಯಾಯ ಮಾಡಬಲ್ಲುದು ?? "
ಈ ವರ್ಷದ BEST READ !!! -
ಒಂದು ದೊಡ್ಡ ಮನೆತನದ ಹುಡುಗಿ ಒಬ್ಬ ದರವೇಶಿಯ ಪ್ರೇಮ ಪಾಶಕ್ಕೆ ಒಳಗಾಗಿ ಅದು ಪ್ರೀತಿಯೋ ಅಲ್ಲವೋ ಅಂತ ತಿಳಿಯುವ ಮುಂಚೆಯೇ ಸಾವಿಗೆ ಶರಣಾಗುವ ದಾರುಣ ಕಥೆ. ಆಕೆಯ ಸಾವಿಗೆ ಬೆರೆಯೋರ್ವನು ಕಾರಣ ಎಂದು ಹುಡುಗಿಯ ತಂದೆ ತಿಳಿಯುತ್ತಾರೆ, ಅದರಿಂದ ಅವನ ಜೀವನದಲ್ಲಿ ಕೊನೆಯಲ್ಲಿ ಬಹಳ ದೊಡ್ಡ ಮಾರ್ಪಾಡು ಉಂಟಾಗುತ್ತದೆ. ಮೊದಲು ಕೂಡ ಹುಡುಗಿಯ ಜೀವನದಲ್ಲಿ ಹೀಗೆ ಆಗಿರುತ್ತದೆ. ನೆರೆಹೊರೆಯ ಹರಕುಬಾಯಿಯಿಂದ ಹುಡುಗಿಯ ಮನಸ್ಸು ಬರಡಾಗಿರುತ್ತದೆ. ಅದರ ಜೊತೆಗೆ ಈ ಪ್ರೀತಿಯ ತಿಕ್ಕಾಟ, ಅದಕ್ಕೆ ಕೊನೆಯೇ ಇಲ್ಲವೇನೋ ಅಂತ ಎನಿಸಿಕೊಂಡು ಕೊನೆಗೆ ಒಂದು ವಿರಾಮವನ್ನು ಹುಡುಕುತ್ತಾಳೆ ಅದುವೇ - ಆತ್ಮಹತ್ಯೆ.
-
When the immense experience of life and artistic imagination get mixed up in the right proportion, Then only a Rich Novel like " Mooru Darigalu" with realistic touch can spring alive. This is the first book I have read from " Yashwanta Chittala", Just like Shivram Karanata gives us a glimpse of Dakshina Kannada, Just like Bhyrappa gives us a glimpse of Mysuru region, "Yaswanta Chitaala" gives us the intricate and detailed sight of Uttara Kannada.
There are multiple characters in this book with unique personalities, Unfurling the diverse web of human society with its versatilities. Every character feels like, Author carefully removed the layers of human behaviors and bound each character with the utmost attention. You could feel the anxiety, joy, depression, fear, satisfaction, and wickedness of each character just like you feel the rushing breeze of waves under moonlight on the nights of Gokarna. When you read the book, You could feel the taste of real village life and its people, With the unique characters of this book. Someone who grew up in the village will appreciate the horror side of living in a connected community which is clearly imagined in this book.
I don't know what exactly the moral of this book, is because it offers multiple interpretations based on your life experience. And I finished this book a few days back, but I am yet to figure out the exact lesson of this book.
I have liked a few characters in this book not because they are good or bad, Because they are very close to real humans' personalities and their baffling mental states.
Nirmala is one of the main protagonists in this book. Her life was amputated and crushed by the Devious man's small mistake. Even though she has not done anything wrong, Narrow-minded Society and the people around her pushed her to commit grave mistakes which pulled her into the oblivion that she can't escape. Even though she meets the costly end, the Author explained her confusion, fear, anxiety, and baffling state of mind as real as possible, you could feel her fall from the top of a mountain to the gutter dug by the people. People's constant judgment about her character, literally makes her lose rational judgment in the end which cost her a lot when everything was going to be okay.
Vasudeva is another protagonist, He is also a Man of tragedy. However, He is the only well-balanced human being with Samaskara in his character in the entire book. Even though society was hurling abuse at the character of Nirmala, He used his rational and human side to see the realities of the story and decide to face the entire society just for love. However, His life also ends in tragedy because Nirmala was not in the right emotional state to understand his love or concern by the time he meets her, she was gone from the world where no one can save her even from Good-natured Vasusdeva. And I also liked the way he handled rejection maturely without tainting the character of Nirmala when she was rude to him unnecessarily, He took all the blame on him just to defend her till the end. Man of tragedy for sure till the end.
And another tragic hero is Vishwanatha,
Father of Tragedy queen Nirmala. Though he is a man of character, he was afraid of what people think of him and his family for each step of his life. This fear cost him everything in the end. His overthinking not just ruined his own daughter's life and also ruined Vasudeva's life. Giving heed to the day-to-day gossip about his daughter, Not just made him lose his mind and also pushed his own daughter's life into the darkness where she cant return.
This book is a clear example of how gossip can ruin the happiness of an entire family. This book offers so many intricate details about human behavior, it can be good study material for those who want to understand human psychology. -
ಕಥೆಯ ಪ್ರಮುಖ ವಿಷಯವೇ ರಂಗಪ್ಪನ ಸ್ಟುಡಿಯೋದಲ್ಲಿ ರಾತ್ರಿ ನಿರ್ಮಲೆ. ಈ ವಿಷಯಕ್ಕೆ ಜನರು ಆಡಿಕೊಳ್ಳುವ ಮಾತುಗಳಿಂದ ಆಗುವ ವಿಚಿತ್ರ ಬದಲಾವಣೆಗಳೆ ಮೂರು ದಾರಿಗಳು. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಗಾದೆಗೆ ನಿರ್ಮಲೆ ಒಳ್ಳೆಯ ಉದಾಹರಣೆ ಆಗುತ್ತಾಳೆ. ರಂಗಪ್ಪನ ತಂಗಿಯ ಗೆಳತನದಿಂದ ಕೆಟ್ಟ ದಾರಿ ಹಿಡಿದ ನಿರ್ಮಲೆಯ ಜೀವನದ ದಾರುಣ ಅಂತ್ಯ ಎಲ್ಲರಲ್ಲೂ ಕಣ್ಣೀರು ತುಂಬುವಂತೆ ಮಾಡುತ್ತದೆ.
ಪುಸ್ತಕ ಓದುತ್ತ ಹೋದಂತೆ ಕಲ್ಲನೆಗೂ ಸಿಗದಂತೆ ಕಥೆ ಬದಲಾಗುತ್ತಾ ಸಾಗುತ್ತದೆ. ಹದಿಹರೆಯದ ಹುಡುಗಿಯ ಮನಸ್ಸಿನಲ್ಲಾಗುವ ಬದಲಾವಣೆಯನ್ನು ಚಿತ್ತಾಲರು ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ನಿರ್ಮಲೆಯ ಸಾವಿನ ನಂತರ ತಪ್ಪಿತಸ್ಥನಲ್ಲದ ವಾಸುದೇವ ಅವಮಾನಿತನಾಗಿ ಊರು ಬಿಟ್ಟು ತಾಯಿ ಕಳೆದುಕೊಂಡು ಬಾಳುವ ಕರುಣಾಜನಕ ಸ್ಥಿತಿಯಿಂದ ಕಾದಂಬರಿಗೆ ಪೂರ್ಣ ವಿರಾಮ ಸಿಗುತ್ತದೆ. -
👌👌👌😢😢
-
his first novel..a incident seen reviewed by three people..whats the truth..set in hanehalli a place appears again and again in chittal's novels this novel is very good